17 March, 2009
ಅಪ್ಪ = 1 ಮಾವ+5 ಗಂಡಂದಿರು+2 ಊರವರು
ಇಲ್ಲಿ ಹುಟ್ಟುವ ಮಗುವಿಗೆ ಅಪ್ಪ ಯಾರು !?ಏಕೆಂದರೆ ಮೊದಲ ರಾತ್ರಿ ಹೆಣ್ಣು ಸ್ವೀಕರಿಸಿದ ಮಾವನ ಜೊತೆ, ನಂತರದವು ಐವರು ಗಂಡಂದಿರ ಒಟ್ಟಿಗೆ, ಇಡೀ ಮನೆಯ ಮೇಲೆ ಸೇಡು ತೀರಿಸಿಕೊಳ್ಳಲು ಪುಸಲಾಯಿಸಿದವನೊಟ್ಟಿಗೆ, (ಹೆಸರಿಗೆ) ಸೇಡು ತೀರಿಸಿಕೊಳ್ಳಲು ಬಂದವನೊಟ್ಟಿಗೆ ಅವಳು, ಆ ಕಲ್ಕಿ ಇರಬೇಕಾಯಿತು.ಹಾಗಂತ ಅವಳು ಹಾದರದವಳಲ್ಲ. ಪ್ರೇಮಮಯ ಸಂಸಾರ ಮಾಡಲು ಆಸೆಪಟ್ಟ ಒಳ್ಳೆಯ ಹೆಣ್ಣು ಮಗಳೇ ಅವಳಾಗಿದ್ದಳು.ಆದರೆ ಏನು ಮಾಡುವುದು ? ಕಾಲವೇ ಹಾಗಿತ್ತು. ಹೆಣ್ಣು ಮಕ್ಕಳೇ ಇಲ್ಲವೆನ್ನುವಷ್ಟು ಅಭಾವ. ಎದ್ದು, ಬಿದ್ದು ಹುಡುಕಿದಾಗ ಊರ ಜಮೀನ್ದಾರನಿಗೆ ಊರಿನಲ್ಲಿ ಒಂದೇ ಒಂದು ಹೆಣ್ಣಿರುವುದು ಗೊತ್ತಾಗುತ್ತದೆ. ದೊಡ್ಡ ಮಗನಿಗೆ ಅಂತ ಹೆಣ್ಣು ನೋಡಲು ಹೋದಾಗ, ಕಡೆಯ ಮಗನಿಗೆ ಬೇಕಾದ್ರೆ ಕೊಡುತ್ತೇವೆ ಅಂತ ಹೇಳುತ್ತಾರೆ. ಮೊದಲೇ ಮದುವೆಯಿಲ್ಲದೇ ಗಂಡು ಮಕ್ಕಳು ಒದ್ದಾಡುತ್ತಿರುತ್ತಾರೆ. ಮೊದಲನೆಯವನಿಗೆ ಬಿಟ್ಟು ಕಡೆಯವನಿಗೆ ಮಾತ್ರ ಮದುವೆ ಮಾಡಿಸಿದರೆ ಎಲ್ಲರ ಕತೆಯೂ ಮುಗಿದು ಹೋದಂತೆಯೇ ಎಂದು ಹುಡುಗರ ತಂದೆಯ ಎಣಿಕೆ. ಐದು ಲಕ್ಷ +ಗೆ ಅವಳನ್ನು ಐದೂ ಮಕ್ಕಳಿಗೆ ತಂದುಕೊಳ್ಳುವ ಮಾತುಕತೆ, ಮದುವೆ.ಇತ್ತ ಈ ಐವರು ಮಕ್ಕಳ ತಾಯಿ ಸತ್ತು ವರ್ಷಗಳೇ ಕಳೆದುಹೋಗಿರುತ್ತವೆ. ಹಾಗಾಗಿ ಅವರ ಅಪ್ಪನಿಗೂ ಆಸೆ ಇರುವುದು ಸಹಜ. ಐವರೂ ಪಾಳಿಯ ಚರ್ಚೆಯಲ್ಲಿದ್ದಾಗ, ಅವರಪ್ಪ ಐದು ಲಕ್ಷ + ಕೊಟ್ಟದ್ದನ್ನು ಹೇಳಿ ಬ್ಲಾಕ್ಮೇಲ್ ಮಾಡಿ, ಅವನೇ ಮೊದಲ ರಾತ್ರಿಗೆ ಹೋಗುತ್ತಾನೆ.ಕಡೆಯಲ್ಲಿ, ಅವಳು ಬಸುರಾಗಿರುವ ಎಲ್ಲ ಲಕ್ಷಣಗಳೂ ಇದ್ದರೂ, ಜಾತಕ ನೋಡದೇ ಅವಳ ಬಸುರನ್ನು ಒಪ್ಪಿಕೊಳ್ಳುವುದಿಲ್ಲ. ಮಗುವಿಗೆ ತಂದೆ ಯಾರು ? ನಾಲ್ವರೂ (ಒಬ್ಬನನ್ನು ಸಾಯಿಸಿರುತ್ತಾರೆ) ಕಿತ್ತಾಟ ಮಾಡಬೇಕು ಎನ್ನುವಷ್ಟರಲ್ಲಿ ಅವರಪ್ಪ 'ಮೊದಲ ರಾತ್ರಿಯಲ್ಲಿ ನಾನಿದ್ದೆ. ಅದಕ್ಕಾಗಿ ನಾನೇ ಆ ಮಗುವಿನ ಅಪ್ಪ' ಎಂದು ಕಡ್ಡಿ ಮುರಿದಂತೆ ಹೇಳುತ್ತಾನೆ.ಅಷ್ಟರವರೆಗೂ ದನಗಳ ಪಕ್ಕ ಕಟ್ಟಿಹಾಕಿದ್ದ ಅವಳನ್ನು ಮನೆಯೊಳಗೆ ತಂದು ಮಲಗಿಸುತ್ತಾರೆ. ಈ ಸುದ್ದಿ ಊರಿಗೆಲ್ಲ ಹರಡಿ, ಸೇಡು ತೀರಿಸಿಕೊಳ್ಳಲು ಕುಮ್ಮಕ್ಕು ಕೊಟ್ಟವನು, ಸೇಡು ತೀರಿಸಿಕೊಳ್ಳಲು ಹೊರಟವನೇ ಆ ಮಗುವಿನ ಅಪ್ಪನೆಂದು ಕೇರಿಯ ಸಮಸ್ತರ ಮುಂದೆ ಘೋಷಿಸುತ್ತಾನೆ. ಹತ್ತೆಂಟು ಮಂದಿ ಅವಳನ್ನು ತಮ್ಮ ಕೇರಿಗೆ ಕರೆದುಕೊಂಡು ಬರಲು ಜಮೀನ್ದಾರರ ಮನೆಗೆ ಹೊರಡುತ್ತಾರೆ. ನಂತರದ ಮಾರಾಮಾರಿಯಲ್ಲಿ ಅಪ್ಪನಾಗುವ ಸ್ಪರ್ಧೆಯಲ್ಲಿದ್ದವರೆಲ್ಲರೂ ಸಾಯುತ್ತಾರೆ.ಅಷ್ಟಾಗುವಾಗ ಅವಳಿಗೆ ಮಗು ಹುಟ್ಟುತ್ತದೆ. ಅವಳಿದ್ದಲ್ಲಿಗೆ ಓಡೋಡಿ ಬಂದ ಮನೆಯ ಕೆಲಸದಾಳು (15-16 ವರ್ಷದವ) ಹೆಣ್ಣು ಮಗು ಹುಟ್ಟಿದೆಯೆಂದು ಅವಳಿಗೆ ಹೇಳುತ್ತಾನೆ. ಅವಳು ಆ ಮಗುವಿನ ಕಡೆಗೊಮ್ಮೆ ಮಂದಹಾಸದ ದೃಷ್ಟಿ ಬೀರಿ, ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ.ಹೀಗೆ ಸಾಗುತ್ತದೆ 'ಮಾತೃಭೂಮಿ' ಚಿತ್ರ. 2003ರ ಈ ಚಿತ್ರದ ಸಬ್ ಟೈಟಲ್ - 'A Nation Without Women' ಚಿತ್ರ ಏನಿರಬಹುದು ಎಂಬ ಊಹೆಗೆ ನಮ್ಮನ್ನು ಹಾಗೇ ಹಚ್ಚಿಬಿಡುತ್ತದೆ. ನೋಡುತ್ತಾ ಹೋದಂತೆ ಊಹೆಗೂ ಮೀರಿದ್ದು ತೀಕ್ಷ್ಣವಾಗಿ ನಡೆಯುತ್ತಾ ಹೋಗುತ್ತದೆ. ಒಂದೇ ಒಂದು ಸ್ಯಾಂಪಲ್ : ಅವಳು ಈ ಅಸಹ್ಯ ಪ್ರಪಂಚದಿಂದ ಓಡಿಹೋಗಲು ಪ್ರಯತ್ನಿಸುತ್ತಾಳೆ. ಅದೇ ಅವಳು ಮಾಡಿದ ಬಹುದೊಡ್ಡ ತಪ್ಪು. ಮನೆಗೂ ಸೇರಿಸುವುದಿಲ್ಲ. ಕೊಟ್ಟಿಗೆಯಲ್ಲಿ ದನಗಳ ಪಕ್ಕ ಕಟ್ಟಿ ಹಾಕುತ್ತಾರೆ. ಹಾಗಂತ ಕೆಲಸ ಮಾತ್ರ ನಿಲ್ಲಿಸುವುದಿಲ್ಲ. ಅವಳಲ್ಲಿ ಊಟ, ತಿಂಡಿ, ನಿದ್ರೆ, ಗಾಳಿ, ಬೆಳಕು ಯಾವುದೂ ಇಲ್ಲದೇ ತಿಂಗಳುಗಟ್ಟಲೆ ಕೊಟ್ಟಿಗೆಯಲ್ಲಿ ಮರದ ಕೊರಡಿನಂತೆ ಬಿದ್ದುಕೊಂಡಿದ್ದಾಗಲೂ, ಅವಳ ಪತಿ ಸಮಾನರೆಲ್ಲರೂ ಅಲ್ಲಿಗೆ ಬಂದು, ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮುಗಿಸಿಕೊಂಡು ಹೋಗುತ್ತಿರುತ್ತಾರೆ. ಅವಳಿಗೆ ಬಂದವರು ಯಾರು ಎಂದು ಗೊತ್ತಾಗುವಷ್ಟರಲ್ಲಿ ಅಲ್ಲಿ ಯಾರೂ ಇರುವುದಿಲ್ಲ. ಹೀಗೇ ನಡೆಯುತ್ತಿದ್ದಾಗ ಅವಳು ಬಸುರಿಯಾಗುತ್ತಾಳೆ. ವಾಂತಿ ಮಾಡಿಕೊಳ್ಳಲೂ ತಾಕತ್ತು ಇರುವುದಿಲ್ಲ. ಅಳು ಗಂಟಲಲ್ಲೇ ಸಿಕ್ಕಿಕೊಂಡಿತು ಎಂದು ಹೇಳುತ್ತೇವಲ್ಲಾ ಹಾಗೇ ಅವಳು ಒದ್ದಾಡುತ್ತಾಳೆ. ಮನೀಶ್ ಝಾ ಚಿತ್ರವನ್ನು ಚೆನ್ನಾಗಿ ನಿರ್ಮಿಸಿದ್ದಾರೆ. ಅಶ್ಲೀಲಕ್ಕೂ ಶೀಲ ತುಂಬಿದ್ದಾರೆ. ಅವಳು, ಆ ಕಲ್ಕಿಯನ್ನು ತುಲಿಪ್ ಜೋಶಿ ಗಟ್ಟಿಯಾಗಿ ಒಪ್ಪಿಸಿದ್ದಾಳೆ. ಅದು ಮಾತೇ ಹೊರಡ ಭಾರವಾದ ಪಾತ್ರ. ಆದರೂ ಮಾತೂ ಹೇಳಲಾಗದ್ದನ್ನು ಮೌನದಲ್ಲಿ ಹೇಳಿಸಿದ್ದು ಆಕರ್ಷಕವಾಗಿದೆ.ಹಾಗಾಗಿ ಇದಕ್ಕೆ ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ.ಸಾಧ್ಯವಾದರೆ ಒಮ್ಮೆ ನೋಡಿ. ಅನ್ನಿಸಿದ್ದನ್ನು ಗಟ್ಟಿಯಾಗಿ ಹೇಳಿ.
12 March, 2009
ಕಾಮ, ಪ್ರೇಮದ ಕೊಟ್ಟಕೊನೆಯ ಪ್ರಪಾತದ ಅಂಚಿನಿಂದ ಕೆಳಗೆ ಬೀಳುತ್ತಿರುವಾಗ...
ನನ್ನ ಮಿತ್ರ ಭಾರತೀಶ ನಿಮಗಾಗಿ ಕಳಿಸಿದ್ದು...ಶತಮಾನದ ಕಾದಂಬರಿಯ ವಿಷಯ. ಆಗ ಕಾಮದ ವಾಸನೆ ಇರುವ ಸಾಹಿತ್ಯ ಆ ಸ್ಥಾನವನ್ನು ಅಲಂಕರಿಸಿದರೆ ಒಪ್ಪುವುದು ಹೇಗೆ !?
ಅದೊಂದು ಲೋಲುಪ, ಹೀನ, ಅಸಹ್ಯ ವಿಷಯಾಸಕ್ತಿ ಎಂದು ಎಲ್ಲರೂ ದೂರ ತಳ್ಳುತ್ತಾರೆ.
ಆ ವಿಷಯದಲ್ಲಿ ನನಗೊಂದು ಅನಿಸುತ್ತದೆ. ಸದಾ ನಮ್ಮನ್ನು ಪ್ರೇಮಿಸುವವರು ಬೇಕು ಎಂಬ ಅದಮ್ಯ ಬಾಯಾರಿಕೆ ಇರುತ್ತದೆ. ಅದು ಏನೋ ಒಂದು ರೀತಿಯ ಆಪ್ತತೆ, ಸುಖ ಕೊಡುತ್ತದೆ. ಯಾಂತ್ರಿಕ ಬದುಕಿಗೆ ವಿದಾಯ ಹೇಳುಬಹುದು ಎಂಬ ಅನಿಸಿಕೆ ಇದೆ. ಅದು ಸಾಧ್ಯ. ಯಾವಾಗ?
ಉದಾಹರಣೆಗೆ, ಹೆಂಡತಿ ಗಂಡನನ್ನು ಪ್ರೀತಿಸುತ್ತಾಳೆ. ಅವನೊಬ್ಬ ನನ್ನ ಸಂಗಾತಿ, ನನ್ನಂತೆಯೇ ಅದಾವನಿಂದಲೋ ಸೃಷ್ಟಿಸಲ್ಪಟ್ಟವ, ಅವನೂ ನನ್ನಂತೆಯೇ ಅದಾವುದಕ್ಕೋ ಹಂಬಲಿಸುತ್ತಿರುವವ, ಅವನಿಗೆ ಉಳಿದವುಗಳೊಂದಿಗೆ ಗುರಿಯಿಂದ ಭಿನ್ನವಾದ ಸಂಬಂಧ ಇಲ್ಲ, ಅವನು ತನ್ನನ್ನು ಅದಾವುದೋ ಶಕ್ತಿಯ ಭಾಗವೆಂದು ಎಷ್ಟು ಪ್ರೀತಿಸುತ್ತಾನೋ, ಆದರಿಸುತ್ತಾನೋ ಅಷ್ಟೇ ನನ್ನನ್ನೂ, ನನ್ನ ತನವನ್ನೂ ಪ್ರೇಮಿಸುತ್ತಾನೆ.. ಅಷ್ಟೆಲ್ಲಾ ಕಾರಣಗಳಿಂದಾಗಿ ಅವಳು ಅವನನ್ನು ಆದ್ಯಂತವಾಗಿ ಪ್ರೀತಿಸುತ್ತಾಳೆ. ಕೊನೆಯವರೆಗೂ ದೂರಾಗದೇ ಇರುವ ಸಂಗಾತಿಯೆಂದು ಹತ್ತಿರದ ಬಂಧವನ್ನು ಭಾವಿಸುತ್ತಾಳೆ. ಅಲ್ಲಿ ಪ್ರೀತಿ ತನ್ನ ಅರ್ಥವನ್ನು ಬಿಟ್ಟುಕೊಡುತ್ತದೆ. ಪ್ರೀತಿಯ ಅರ್ಥವನ್ನು ಹೀಗೆ ಎಂದು ಹೇಳಲು ಸಾಧ್ಯವಿಲ್ಲದ್ದರಿಂದ ಇದೇ ರೀತಿಯ ಯಾವುದಾದರೂ ಕ್ರಮದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಅನಿವಾರ್ಯ.
ಹಾಗೆ ಗಂಡ-ಹೆಂಡತಿಯರು ಇರಲಾಗದ ಪರಸ್ಥಿತಿಯನ್ನೂ ಕಲ್ಪಿಸಿಕೊಳ್ಳಿ. ಅವರ ಸಂಬಂಧ ಒಂದಷ್ಟು ಮೆಟೀರಿಯಲ್ ಸ್ಟಾಂಡರ್ಡ್್ಗಳ ಮೇಲೆ ನಿಂತಿರುತ್ತದೆ. ಅಂದರೆ, ಸಮಾಜದ ಹೆದರಿಕೆಯಿಂದ ಆ ಸಂಬಂಧವನ್ನು ಹಾಗೇ ಉಳಿಸಿಕೊಳ್ಳುತ್ತಾರೆ, ಮಕ್ಕಳ ಮೇಲಿನ ಮಮಕಾರದಿಂದ ಸಂಬಂಧವನ್ನು ಕಡಿದುಕೊಳ್ಳುವುದಿಲ್ಲ (ಇಬ್ಬರ ರಕ್ತವನ್ನೂ ಹಂಚಿಕೊಂಡು ಹುಟ್ಟಿರುವ ಮಕ್ಕಳಿಂದ ಗಂಡ-ಹೆಂಡತಿಯರ ಪಾಲನ್ನು ಇಷ್ಟಿಷ್ಟು ಎಂದು ಬೇರ್ಪಡಿಸಲಾಗದ್ದಕ್ಕಾಗಿ), ಇಷ್ಟರಮಟ್ಟಿಗಿನ ಸಂಗಾತಿಯೂ ಸಿಗದಿರುವ ಆತಂಕ, ಭಯದ ಕಾರಣದಿಂದಾಗಿ ಎಷ್ಟೋ ಸಂಬಂಧಗಳು ನಡುಗುತ್ತಾ ನಿಂತಿರುತ್ತವೆ.
ಆ ಹಂತದಲ್ಲಿ ತೀವ್ರ ಆಪ್ತ ಭಾವವನ್ನು ಸೃಜಿಸುವುದು ಈ ಕಾಮವೇ (ಕೆಲ ಕ್ಷಣಗಳ ಮಟ್ಟಿಗೆ) ಎಂದು ಅನಿಸುತ್ತದೆ. ಅದಕ್ಕೆ ಸರಿಯಾಗಿ ದೈಹಿಕ ಪ್ರಚೋದನೆಯೂ ವಿದ್ಯುತ್ ವೇಗವನ್ನು ಪಡೆಯುತ್ತದೆ. ನಂತರ ಏನಾಗುತ್ತದೋ ಒಂದೂ ಗೊತ್ತಾಗುವುದಿಲ್ಲ. ಎಲ್ಲವೂ ಸುಖವಾಗಿ ಕಳೆಯುತ್ತದೆ. ನಂತರ ಮಾಡಿದ್ದು ತಪ್ಪಾಯಿತು ಎನಿಸಿದರೆ! ಹಿಂದೆ ಪರಿಹಾರವಿರಲಿಲ್ಲವೇನೋ. ಈಗಂತೂ Unwanted 72 ಇದೆ. ಎಪ್ಪತ್ತೆರಡು ಗಂಟೆಗಳ ವರೆಗೆ ಮಾಡಿದ ತಪ್ಪನ್ನು (ಒಂದು ವೇಳೆ ಅನಿಸಿದರೆ) ಮುಚ್ಚಿಕೊಳ್ಳುವುದು ಸುಲಭ ಸಾಧ್ಯ.
ಬಿಡಿ. ಈ ಭಾವವೇ ನಮ್ಮ ಸ್ವಚ್ಛಂದ ಲೇಖಕರನ್ನು ಆಕರ್ಷಿಸುತ್ತದೆ. ಮರಳು ಮಾಡುತ್ತದೆ. ಅವರ ಸಾಹಿತ್ಯವನ್ನು ಈ ಭಾವ ರೊಯ್ಯನೆ ತನ್ನೆಡೆಗೆ ಸೆಳೆಯುತ್ತದೆ. ಆಗವನಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನಂತರ ಭಾವ ತಹಬಂದಿಗೆ ಬಂದಾಗ ಕಾಮವನ್ನೂ ದಾಟಿ ಸಾಹಿತಿ ಮುಂದಕ್ಕೂ ಹೋಗಲು ಸಾಧ್ಯವಾದರೆ ಆ ಸಾಹಿತಿ ಗೆಲ್ಲುತ್ತಾನೆ. ಕಾಮದ ಪ್ರವಾಹ ಅಷ್ಟು ಪ್ರಬಲವಾಗಿರುತ್ತದೆ ಎಂದು ಎನಿಸುತ್ತದೆ.
ಹಾಗೆಲ್ಲ ನೋಡುವಾಗ ನಮ್ಮ ಸಂಸ್ಕೃತದ ಶೃಂಗಾರ ಪ್ರಧಾನ ಸಾಹಿತಿಗಳನ್ನೂ ಒಮ್ಮೆ ನೋಡಬೇಕು. (ಒಟ್ಟಾರೆ ಅಭಿಪ್ರಾಯದಲ್ಲಿ) ಅವರ ಕಾಮ ದೈಹಿಕ ಕ್ರಿಯೆಯ ಮಟ್ಟಕ್ಕೆ ಇಳಿಯುವುದಿಲ್ಲ. ಅದು ಶೃಂಗಾರದ, romanceನ ಹಂತದಲ್ಲಿಯೇ ತೇಲುತ್ತಿರುತ್ತದೆ. ಸೆಲೆಬ್ರೇಷನ್ ಇರುತ್ತದೆ. ಸಂಗ ಸುಖದ ನಂತರ ಪಶ್ಚಾತ್ತಾಪ, ಬೇಜಾರು, ಜಿಗುಪ್ಸೆ ಯಾವುದೂ ಇರುವುದಿಲ್ಲ. ಅವರ ಪ್ರಣಯ ಶುರುವಾಗುವುದು 'ಭಗ (ಯೋನಿ) ಪೂಜೆ'ಯೊಂದಿಗೆ. ಸೃಷ್ಟಿ ವಿಸ್ತಾರಕ್ಕೆ ತನ್ಮೂಲಕ ಅವಕಾಶ ಕೊಡುವ ಯೋನಿಗೆ ಮೊದಲ ಪೂಜೆ. ಈ ಹಿನ್ನೆಲೆಯಲ್ಲಿಯೇ ಶ್ರೀರಂಗ ಮಹಾಗುರು ದಂಪತಿಯ ಅಷ್ಟೋತ್ತರ ಶತನಾಮಾವಳಿಯಲ್ಲಿ ಒಂದು ನಾಮ 'ಭಗಪೂಜಾ ಪರಾಯಣಾಯ ನಮಃ' ಎಂದೇ ಇದೆ. ಅದಕ್ಕೆ ಈ ಅರ್ಥವಂತೆ. ನಂತರ ತತ್ತ್ವ ವಿಸ್ತಾರಕ್ಕಾಗಿ ಮಗುವನ್ನು ಪಡೆಯಲು ಭೋಗ ಪ್ರಕ್ರಿಯೆ. ಎಲ್ಲೂ ಮೈಮರೆವಿಲ್ಲ. ಹಾಗಂತ ಕ್ರಿಯೆ ಯಾಂತ್ರಿಕವಾಗಿಯೂ ನಡೆಯುವುದಿಲ್ಲ. ಭೋಗದ ಕೆಸರಿನಲ್ಲಿ ಭವದ ಕಮಲ ಅರಳಿಸುವ ಕ್ರಿಯೆ. ಹಾಗೆ ಕಾಮವೂ ಪ್ರೇಮ ನದಿಯಲ್ಲಿ ಸಾಗುತ್ತದೆ.
ಸದ್ಯ, ನಮ್ಮ ಕಾಮ ಹಾದಿ ತಪ್ಪಿರುವುದರಿಂದ ಪ್ರೇಮದ ಕೊಟ್ಟಕೊನೆಯ ಪ್ರಪಾತದ ಅಂಚಿನಿಂದ ಕೆಳಗೆ ಬೀಳುತ್ತದೆ. ಹೇಸಿಗೆ, ರೇಜಿಗೆ ಎಲ್ಲವನ್ನೂ ಹುಟ್ಟಿಸುತ್ತದೆ. ಇದರಲ್ಲಿ ಯಾರದ್ದು ತಪ್ಪು? ಕಾಮದ್ದೋ? ನಮ್ಮದೋ?
ಹೀಗೇ ನನ್ನ ಮನಸ್ಸಿಗೇ ವಿಸ್ತರಿಸಿಕೊಳ್ಳುವ ಮನಸ್ಸಾಯಿತು. ಅದನ್ನೇ ಇಲ್ಲಿಯೂ ಬರೆದಿದ್ದೇನೆ. ಇಷ್ಟವಾಗಬಹುದು ಎಂದು ಅಂದುಕೊಂಡಿದ್ದೇನೆ.

- Bharatheesha P.
ಜಗಜ್ಜಾಹೀರಾಗಬೇಕಾದಷ್ಟು ವಿಷಯ ನಿಷ್ಠೆಯ ಘಮಲು
ನನ್ನ ಮಿತ್ರ ಭಾರತೀಶ ನಿಮಗಾಗಿ ಕಳಿಸಿದ್ದು...What we owe to the poor
- John M. Alexander (The Hindu, 3rd Nov 2008)
Understanding Prof. Sen's underlying motivation for public action and empowerment is as important as are his many contributions to development economics. The 18th century moral philosopher, Immanuel Kant, noted that while things have their prices and can be replaced with something equivalent, human beings have dignity and are irrespectable.. According to Prof. Sen, all development agenda should take seriously the dignity of the human person and treat people with respect and honour. For exampe, it is more acceptable and dignified to link famine relief, insurance against povery and social securiy programmes to employment and long term enterpreceurship than mere cash transfers and food distribution. People should be seen not as mere 'patients' and beneficiaries to whom various welfare benefits are dispended, but as 'agents' who can make decisions, solve their problems and take control of their own destiny.
Development is not a script written by a few enlightened individuals to be faithfully enacted by others. Participation at all levels is both the end and means of development. The responsiblity of a just society is to ensure appropiate conditions so that everyone, particulary the weak and poor, will have the required opportunities and institutions to exercise and develop their capabilities and agency. What else could be a more fitting way of honouring Amartya Sen, the economist of the poor and philosopher of empowerment?
ಇದೇ ಮೂಡಿನಲ್ಲಿರುವ ಮತ್ತೊಂದು ವಿಷಯ.
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ರಾಧಾಕೃಷ್ಣ ಎಂಬ ಕಾಮರ್ಸ್ ಪ್ರೊಫೆಸರ್ ಇದ್ದರು. ಅವರು 40+ನ Young and Energetic ಆಗಿದ್ದವರು.
ಒಮ್ಮೊಮ್ಮೆ ಅವರು... "ಭಿಕ್ಷುಕ ಅದೇ ಮೊದಲ ಬಾರಿಗೆ ನನ್ನ ಮನೆ ಬಾಗಿಲಿಗೆ ಬಂದರೆ ಭಿಕ್ಷೆ ಹಾಕುತ್ತೇನೆ. ಮರುದಿನವೂ ಅದೇ ಮುಂದುವರೆದರೆ ಹಾಕುವುದಿಲ್ಲ.. ಸಾಧ್ಯವಾದರೆ ದುಡಿಯುವ ದಾರಿ ತೋರಿಸಿಕೊಡುತ್ತೇನೆ. ಮಾಡುವುದು ಬಿಡುವುದು ಅವನಿಷ್ಟ. ಜೀವನಪೂರ್ತಿ ಅವನು ಭಿಕ್ಷುಕನಾಗಿಯೇ ಮುಂದುವರೆಯಲು ನನ್ನ ಸಹಕಾರ, ಪ್ರೋತ್ಸಾಹ ಯಾವುದೂ ಇರುವುದಿಲ್ಲ".
Amarya Sen's 10 Popular Books
Povery and Famines
On Ethics and Economics
Commodities and Capabilities
Hunger and Public Action
Inequality Reexamined
On Economic Inequality
Development as Freedom
India : Development and Participation
The Argumentative Indian
Identity and Violence.
I think Titles are catchy.
ಇದು ಜಾಹೀರಾತಲ್ಲ. ಜಗಜ್ಜಾಹೀರಾಗಬೇಕಾದಷ್ಟು ವಿಷಯ ನಿಷ್ಠೆಯ ಘಮಲು ಹೊಡೆಯುತ್ತಿದೆ. ಸಾಧ್ಯವಾದರೆ ಪುಸ್ತಕಗಳನ್ನೊಮ್ಮೆ ನೋಡಿ. ನಾನು ಅವುಗಳನ್ನು ಓದಲು ಪ್ರಾರಂಭಿಸಬಹುದೇ ಹೇಳಿ.

ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ ?
ಪಶುಗಳೊಡನೆ ಪಶುವಾಗಿಯಾದರೂ ಬದುಕಲೇ ? ಅವಕ್ಕೆನಿತು ಶಾಂತಿ, ಎನಿತು ತೃಪ್ತಿ !
ನೋಡುತ್ತ ನಿಂತೆನೆಂದರೆ ಘಂಟೆಘಂಟೆ ಹರಿದರೂ ಹೊತ್ತು ಗೊತ್ತಾಗುವುದಿಲ್ಲ.
ತಮ್ಮ ಇರವಿಗೆ ಮರುಗಿ ಅವು ಕುದಿಯುವುದಿಲ್ಲ, ಬಾಯಿ ಬಡಿದುಕೊಳ್ಳುವುದಿಲ್ಲ, ಪರದಾಡುವುದಿಲ್ಲ.
ಇರುಳೆಲ್ಲ ನಿದ್ದಗೆಟ್ಟು ಪಾಪಗಳಿಗಾಗಿ ಪಶ್ಚಾತ್ತಾಪಪಡುವುದಿಲ್ಲ.
ದೇವರು ಧರ್ಮಗಳನ್ನು ಕುರಿತು ಜಿಜ್ಞಾಸೆ ಮಾಡುತ್ತಾ ನನಗೆ ರೇಜಿಗೆ ಹಿಡಿಸುವುದಿಲ್ಲ.
ಅವುಗಳಲ್ಲಿ ಯಾವೊಂದಕ್ಕೂ ಅತ್ಯಾಸೆಯಿಲ್ಲ, ಯಾವೊಂದೂ ವಸ್ತುಗಳಿಗೆ ಒಡೆಯನಾಗಬೇಕೆಂದು ತಲೆಕೆಡಿಸಿಕೊಂಡಿಲ್ಲ.
ಒಂದಾದರೂ ಮತ್ತೊಂದಕ್ಕೆ ಮೊಣಕಾಲು ಮಣಿಯುವುದಿಲ್ಲ, ಕಾಲಿಗೆ ಬೀಳುವುದಿಲ್ಲ, ಜೊತೆ ಇರುವವಕ್ಕಾಗಲಿ, ಶತಮಾನಗಳಿಗೆ ಹಿಂದೆ ಬದುಕಿದ್ದವುಗಳಿಗಾಗಲಿ..
ಯಾವೊಂದೂ ಶ್ರೀ ಶ್ರೀ ಶ್ರೀಯಾಗಿಲ್ಲ ; ಹುಡುಕಿದರೂ ಮತ್ಸರದ ಅಸುಖ ದೊರೆಯುವುದಿಲ್ಲ.
ಯಾವೊಂದೂ ಬಿರುದುವೊತ್ತು ಗೌರವಪದವಿಗೇರಿಲ್ಲ.
- ವಾಲ್ಟ್ ವಿಟ್ಮನ್ ಕವಿ ವಚನದ ಕನ್ನಡ ಅನುವಾದ ಕುವೆಂಪು ಅವರಿಂದ
Subscribe to:
Posts (Atom)